ಜಪಾನ್ ಎಂದಾಕ್ಷಣ ಮೊದಲು ನೆನಪಾಗುವುದು ತಂತ್ರಜ್ಞಾನ, ನಂತರದ್ದು...? ಅಗ್ನಿಪರ್ವತ. ಈ ನಡುವೆ ಇನ್ನೊಂದು ಸಮಸ್ಯೆ ಜೀವಂತವಾಗುಳಿಯುವುದು ಇವೆಲ್ಲ ಆತಂಕ ಸ್ಥಿತಿಯಲ್ಲೂ ಜಪಾನ್ ಜೋಪಾನವಾಗಿದೆಯಲ್ಲ? ಎಂಬುದು. ಇಂಥಾ ಭಯಾನಕ ಅಗ್ನಿಪರ್ವತಗಳ ಪಟ್ಟಿಯಲ್ಲಿ ಪ್ರಮುಖವಾದುದ್ದು ಮೌಂಟ್ ಫುಜಿ. ಈ ಜೀವಂತ ಅಗ್ನಿಪರ್ವತ ಕೊನೆ ಬಾರಿ ಅಬ್ಬರಿಸಿದ್ದು ೧೭೦೭-೦೮ರಲ್ಲಿ. ೩,೭೭೬ ಮೀಟರ್ ಎತ್ತರವಿರುವ ಪರ್ವತದ ಬಗ್ಗೆ ಇತ್ತೀಚಿನ ದಶಕಗಳ ವರೆಗೂ ಮೂಢನಂಬಿಕೆಗಳು ಕೇಳಿಬರುತ್ತಲೇ ಇದ್ದವು. ಅಗ್ನಿದೇವ ಇಲ್ಲೇ ನೆಲೆಸಿದ್ದಾನೆ, ಅವನನ್ನು ತುಳಿದರೆ (ಬೆಟ್ಟ ಹತ್ತಿದರೆ) ಸ್ಫೋಟಿಸುತ್ತಾನೆ ಎಂಬ ಮೌಢ್ಯ ಆವರಿಸಿತ್ತು. ಆದರೆ, ಎರಡು ದಶಕದಿಂದ ಇದರ ಮುಖವಾಣಿಯೇ ಬದಲಾಗಿದೆ. ಈಗ ಇದೊಂದು ಅತ್ಯಾಕರ್ಷಕ ಪ್ರವಾಸಿತಾಣ. ಪ್ರತಿವರ್ಷ ೨ ಲಕ್ಷ ಜನ ಈ ಪರ್ವತವನ್ನು ಹತ್ತಿಳಿಯುತ್ತಾರೆ. ಅಲ್ಲದೇ, ಇದರ ಸುತ್ತ ೫ ನದಿಗಳು ಹರಿಯುವುದರಿಂದ ಶೂಟಿಂಗ್ ವಿಷಯದಲ್ಲೂ ಸೈ ಎನ್ನಿಸಿಕೊಂಡ ಪ್ರದೇಶವಿದು. ಮೌಂಟ್ ಫುಜಿಯ ೧೦,೦೦೦ ವಿವಿಧ ದೃಶ್ಯಾವಳಿಗಳಿಂದ ಎನ್ನಿಸ್ ಎಂಬ ಫೋಟೋಗ್ರಾಫರ್ ಎರಡು ಆಲ್ಬಂ ಹೊರತಂದು ಹೆಸರು ಮಾಡಿದ್ದ.
hit counter code |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ